ಬುರ್ಜ್ ಖಲೀಫಾಗಿಂತ ದೊಡ್ಡದಾದ ಕ್ಷುದ್ರಗ್ರಹವೊಂದು ಫೆಬ್ರವರಿ 4 ರಂದು ಭೂಮಿಯ ಸನಿಹದಲ್ಲಿ ಹಾದು ಹೋಗಲಿದೆ.

ಬುರ್ಜ್ ಖಲೀಫಾಗಿಂತ ದೊಡ್ಡದಾದ ಕ್ಷುದ್ರಗ್ರಹವೊಂದು ಫೆಬ್ರವರಿ 4 ರಂದು ಭೂಮಿಯ ಸನಿಹದಲ್ಲಿ ಹಾದು ಹೋಗಲಿದೆ. ಕ್ಷುದ್ರಗ್ರಹ, 2002 AJ149, ನಮ್ಮ ಭೂಮಿಯ ಕಡೆಗೆ ತನ್ನ ಪಥದಲ್ಲಿ ಬರುತ್ತಿದ್ದು, ಭೂಮಿಯಿಂದ 4.18 ಮಿಲಿಯನ್ ಕಿ.ಮೀ (2.6 ಮಿಲಿಯನ್ ಮೈಲುಗಳಷ್ಟು) ದೂರದಿಂದ ಹಾದು ಹೋಗಲಿದೆ.

ಕ್ಷುದ್ರಗ್ರಹವು 1.1 ಕಿಮೀ (0.7 ಮೈಲಿ) ಉದ್ದವನ್ನು ಹೊಂದಿದ್ದು, ದುಬೈ ಮೂಲದ ಬುರ್ಜ್ ಖಲೀಫಾಗಿಂತ 0.8 ಕಿಮೀ (0.5 ಮೈಲಿ) ಎತ್ತರವಿದೆ.

ಇದು 67,000 ಮೈಲಿ ಪ್ರತಿ ಗಂಟೆ ( 107,826 kmph) ವೇಗದಲ್ಲಿ ಹಾದುಹೋಗಲಿದೆ.

ಕ್ಷುದ್ರಗ್ರಹಗಳು ಗ್ರಹಗಳಿಗಿಂತ ಸಣ್ಣದಾಗಿರುವ ಆಕಾಶಕಾಯಗಳಾಗಿವೆ, ಅವು ಅನಿಯಮಿತವಾಗಿ ಆಕಾರದಲ್ಲಿರುತ್ತವೆ ಮತ್ತು ಇವುಗಳಿಗೆ ಯಾವುದೇ  ಸ್ಥಿರವಾದ ಕಕ್ಷೆಗಳಿಲ್ಲ. ನಮ್ಮ ಸೌರವ್ಯೂಹದಲ್ಲಿ, ಹೆಚ್ಚಿನ ಕ್ಷುದ್ರಗ್ರಹಗಳು ಮಂಗಳ ಮತ್ತು ಕ್ಷುದ್ರಗ್ರಹ ಪಟ್ಟಿಯಿಂದ ( ಗುರುಗ್ರಹದ ನಡುವಿನ ವಲಯ  ಇದನ್ನು ಇಂಗ್ಲಿಷ್ನಲ್ಲಿ Asteroid Belt ಎಂದು ಕರೆಯುತ್ತಾರೆ  ) ಹುಟ್ಟಿಕೊಳ್ಳುತ್ತವೆ.

ನಾಸಾ ಯಾವ ವಸ್ತುಗಳು  ಭೂಮಿಯಿಂದ 4.6 ದಶಲಕ್ಷ ಮೈಲಿಗಳೊಳಗೆ, ಹಾಡು ಹೋಗುತ್ತವೆಯೋ ಅವುಗಳನ್ನು 'ಅಪಾಯಕಾರಿ' ಎಂದು ವರ್ಗೀಕರಿಸುತ್ತದೆ. ಈ ಕ್ಷುದ್ರಗ್ರಹದಷ್ಟು ಗಾತ್ರದ ಒಂದು ಬಂಡೆಯು ಭೂಮಿಯ ಮೇಲೆ ಹೊಡೆದರೆ ಅದು ಒಂದು ಸಣ್ಣ-ಹಿಮಯುಗವನ್ನು ಸೃಷ್ಟಿಸಬಹುದೆಂದು ನಿರೀಕ್ಷಿಸಲಾಗಿದೆ. ಆದರೆ ಈ ಕ್ಷುದ್ರಗ್ರಹದಿಂದ ಭೂಮಿಗೆ ಯಾವುದೇ ಅಪಾಯಡಾ ಸಾಧ್ಯತೆ ಬಹಳ ಕಡಿಮೆ.

Back To Top