ರೆಡ್ಮಿ 5 ಸ್ಮಾರ್ಟ್ ಫೋನ್ ಮಾರ್ಚ್ 14 ರಂದು ಲಾಂಚ್ ?

Xiaomi ಇದೇ ಮಾರ್ಚ್ ೧೪ರಂದು ಒಂದು ಹೊಸ ಸ್ಮಾರ್ಟ್ಫೋನನ್ನು ಅನಾವರಣಗೊಳಿಸಲಿದೆ. ಯಾವ ಸ್ಮಾರ್ಟ್ಫೋನ್ ಲಾಂಚ್ ಆಗಲಿದೆ ಎಂದು ಇನ್ನು ಹೇಳಿಲ್ಲವಾದರೂ ಕೆಲವು ವರದಿಗಳ ಪ್ರಕಾರ ರೆಡ್ಮಿ 5 ಸ್ಮಾರ್ಟ್ ಫೋನ್ ಲಾಂಚ್ ಆಗಲಿದೆ.

ಈ ಫೋನನ್ನು ಚೀನಾದಲ್ಲಿ ಈಗಾಗಲೇ ಲಾಂಚ್ ಮಾಡಿದ್ದು ಇದಕ್ಕೆ Compact Powerhouse ಎನ್ನುವ ಟ್ಯಾಗ್ ನೀಡಿದೆ. ರೆಡ್ಮಿ 5 ಸ್ಮಾರ್ಟ್ ಫೋನ್ ಅಮೆಜಾನ್ ಇಂಡಿಯಾ ವೆಬ್ ಸೈಟ್ ನಲ್ಲಿ ಲಭ್ಯವಾಗಲಿದ್ದು ಮ್ಯಾಚ್ 14ರ 3 ಗಂಟೆಗೆ ಈ ಸ್ಮಾರ್ಟ್ಫೋನ್ ಲಾಂಚ್ ಆಗಲಿದೆ. ಅಮೆಜಾನ್ ಈಗಾಗಲೇ ಇದರ ಬಗ್ಗೆ ವೆಬ್ ಸೈಟ್ ನಲ್ಲಿ ಬ್ಯಾನರ್ ಹಾಕಿಕೊಂಡಿದೆ.

ಅಮೆಜಾನ್ ವೆಬ್ ಸೈಟ್ ನಲ್ಲಿ ಇದರ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಫೋನಿನ ಬಗ್ಗೆ ಊಹಿಸಲಾದ ವಿಶೇಷತೆಗಳು

ಈ ಫೋನಿನ ವಿಶೇಷತೆಗಳ ಬಗ್ಗೆ ಹೇಳುವುದಾದರೆ ಇದು 5.7 ಇಂಚಿನ 18:9 aspect ratio ಹೊಂದಿರುವ HD+ ಡಿಸ್ಪ್ಲೇ ಹೊಂದಿರಲಿದೆ. ಇದು Snapdragon 450 SoC ಪ್ರೊಸೆಸರ್ ಹೊಂದಿರಲಿದ್ದು 2 ಭಿನ್ನ ರೂಪಗಳಲ್ಲಿ ( 2GB Ram + 16GB ಇಂಟರ್ನಲ್ ಸ್ಟೋರೇಜ್ ಮತ್ತು 3GB Ram + 32GB ಇಂಟರ್ನಲ್ ಸ್ಟೋರೇಜ್ ) ದೊರೆಯಲಿದೆ ಎಂದು ಊಹಿಸಲಾಗಿದೆ . ಈ ಫೋನಿನ ಬೆಲೆ 7೦೦೦ ರೂಪಾಯಿಯಿಂದ ಪ್ರಾರಂಭವಾಗಲಿದ್ದು ಮಾರ್ಚ್ ೨೦ರ ನಂತರ ಸೇಲ್ ಶುರುವಾಗಲಿದೆ ಎಂದು ಹೇಳಲಾಗುತ್ತಿದೆ.

Back To Top