ಲ್ಯಾಪ್ಟಾಪ್ ಮತ್ತು ಡೆಸ್ಕ್ಟಾಪ್ ಕಂಪ್ಯೂಟರ್ ನಡುವೆ ನಿಮಗೆ ಯಾವುದು ಸೂಕ್ತ ?

ಕಂಪ್ಯೂಟರ್ ತೆಗೆದುಕೊಳ್ಳಬೇಕು ಎಂದು ನಿರ್ಧರಿಸಿದ ತಕ್ಷಣ ಕಾಡುವ ಒಂದು ಪ್ರಶ್ನೆ ಎಂದರೆ ಲ್ಯಾಪ್ಟಾಪ್ ತೆಗೆದುಕೊಳ್ಳುವುದಾ ಅಥವಾ ಡೆಸ್ಕ್ಟಾಪ್ ಕಂಪ್ಯೂಟರ್ ತೆಗೆದುಕೊಳ್ಳುವುದ ಎನ್ನುವುದು. ಈ ನಿರ್ಣಯ ತೆಗೆದುಕೊಳ್ಳಲು ನೀವು ಪರಿಗಣಿಸಬೇಕಾದ ಕೆಲವೊಂದು ವಿಷಯಗಳ ಬಗ್ಗೆ ನಾವಿಲ್ಲಿ ಚರ್ಚಿಸಿದ್ದೇವೆ.

ಕಂಪ್ಯೂಟರ್ ಎಂದ ತಕ್ಷಣ ಲ್ಯಾಪ್ಟಾಪ್ ನೆನಪಿಗೆ ಬರುತ್ತದೆ ಮತ್ತು ಒಂದು ಕಂಪ್ಯೂಟರ್ ತೆಗೆದುಕೊಳ್ಳಬೇಕೆಂದಾಗ ಕೆಲವರು ಹೆಚ್ಚೇನು ಯೋಚಿಸದೆ ಲ್ಯಾಪ್ಟಾಪ್ ತೆಗೆದುಕೊಳ್ಳುತ್ತಾರೆ.

ಲ್ಯಾಪ್ಟಾಪ್ ಮತ್ತು ಡೆಸ್ಕ್ಟಾಪ್ ಕಂಪ್ಯೂಟರ್ ಇವೆರಡರಲ್ಲೂ ಸಹ ನೀವು ಕಂಪ್ಯೂಟರ್ ಅನ್ನು ಉಪಯೋಗಿಸಿ ಮಾಡಬಹುದಾದ ಎಲ್ಲಾ ಕೆಲಸಗಳನ್ನು ಮಾಡಬಹುದು. ಆದರೆ ಇವುಗಳಲ್ಲಿ ಯಾವುದನ್ನೂ ಕೊಂಡರೂ ಸಹ ಕೆಲವೊಂದು ಧನಾತ್ಮಕ ಮತ್ತು ಋಣಾತ್ಮಕ ಅಂಶಗಳನ್ನ ನೀವು ನೋಡಬಹುದು.

ಡೆಸ್ಕ್ಟಾಪ್ ಕಂಪ್ಯೂಟರ್ ಕೊಂಡರೆ ಆಗುವ ಕೆಲ ಲಾಭಗಳು

ನೀವು ನಿಮಗೆ ಬೇಕಾದ ಪಾರ್ಟ್ಸ್ ಗಳನ್ನ ನಿಮಗೆ ಬೇಕಾದ ಕಂಪನಿಯ ಪಾರ್ಟ್ಸ್ ಗಳನ್ನು ಆಯ್ಕೆ ಮಾಡುವ ಅವಶವಿರುತ್ತದೆ. ನಿಮ್ಮ ಅಗತ್ಯತೆಗೆ ಅನುಗುಣವಾಗಿ ಪಾರ್ಟ್ಸ್ಗಳನ್ನು ಆಯ್ಕೆಮಾಡಿಕೊಳ್ಳಬಹುದು. ಲ್ಯಾಪ್ಟಾಪ್ ಗಳಿಗೆ ಹೋಲಿಸಿದರೆ ಸ್ವಲ್ಪ ಕಡಿಮೆ ಹಣದಲ್ಲಿ ಅಷ್ಟೇ ಹಣದಲ್ಲಿ ದೊರೆಯುವ ಲ್ಯಾಪ್ಟಾಪ್ ಗಳಿಗಿಂತ ಹೆಚ್ಚು ಕ್ಷಮತೆಯುಳ್ಳ ಕಂಪ್ಯೂಟರ್ ಅನ್ನು ತಯಾರು ಮಾಡಿಕೊಳ್ಳಬಹುದು.

warranty ಮುಗಿದ ನಂತರ ಯಾವುದಾದರೊಂದು ಪಾರ್ಟ್ ಹಾಳಾದರೆ ಅದನ್ನ ಬಹಳ ಕಡಿಮೆ ಹಣದಲ್ಲಿ ನೀವೇ ಬದಲಾಯಿಸಬಹುದು.

ಸ್ವಲ್ಪ ಸಮಯದ ನಂತರ ನಿಮ್ಮ ಅಗತ್ಯತೆಗೆ ಅನುಗುಣವಾಗಿ ನಿಮ್ಮ ಡೆಸ್ಕ್ಟಾಪ್ ಕಂಪ್ಯೂಟರಿಗೆ ಇನ್ನು ಹೆಚ್ಚಿನ ಪಾರ್ಟ್ಸ್ ಗಳನ್ನೂ ಸೇರಿಸಿವುದರ ಮೂಲಕ ಕ್ಷಮತೆ ಹೆಚ್ಚಿಸಬಹುದು.

ಡೆಸ್ಕ್ಟಾಪ್ ಕಂಪ್ಯೂಟರಿನ ಕೆಲ ಭಾದಕಗಳು

ಒಂದೇ ಜಾಗದಲ್ಲಿ ಇಡಬೇಕಾಗುತ್ತದೆ. ಇನ್ನೊಂದು ಕಡೆಗೆ ಸ್ಥಳಾಂತರಿಸುವುದು ಸ್ವಲ್ಪ ಕಷ್ಟ.

ಯಾವುದೇ ಸಮಯದಲ್ಲಿ ಉಪಯೋಗಿಸಲು ಇನ್ವರ್ಟರ್ ಅಥವಾ ಇತರ ಯಾವುದೇ ಮಾದರಿಯ ಪರ್ಯಾಯ ವಿದ್ಯುತ್ ವ್ಯವಸ್ಥೆ ಅಗತ್ಯ.

ಲ್ಯಾಪ್ಟಾಪ್ ಕೊಂಡರೆ ಸಿಗುವ ಕೆಲ ಲಾಭಗಳು

ಎಲ್ಲಿಗೆ ಬೇಕಾದರೂ ತೆಗೆದುಕೊಂಡು ಹೋಗಬಹುದು.

ಸ್ವಲ್ಪ ಸಮಯದ ವರೆಗೆ ವಿದ್ಯುತ್ ಸಂಪರ್ಕ ಇಲ್ಲದಿದ್ದರೂ ಸಹ ಇದನ್ನು ಬಳಸಬಹುದು.

ಲ್ಯಾಪ್ಟಾಪ್ ಕಂಪ್ಯೂಟರಿನ ಕೆಲ ಭಾದಕಗಳು

ಬ್ರಾಂಡ್ ವ್ಯಾಲ್ಯೂ ನಿಂದಾಗಿ ಇವುಗಳಿಗೆ ಸ್ವಲ್ಪ ಹೆಚ್ಚು ಹಣ ತೆರಬೇಕಾಗುತ್ತದೆ.

warranty ಮುಗಿದ ನಂತರ ಪಾರ್ಟ್ಸ್ ಗಳ ಬದಲಾವಣೆ ಸ್ವಲ್ಪ ಕಷ್ಟ ಮತ್ತು ಹೆಚ್ಚು ಹಣ ಬೇಕಾಗುತ್ತದೆ.

ಹೊಸ ಪಾರ್ಟ್ಸ್ ಗಳನ್ನೂ ಸೇರಿಸುವುದರ ಮೂಲಕ ಕಾರ್ಯ ಕ್ಷಮತೆ ಹೆಚ್ಚಿಸಲು ಕಡಿಮೆ ಅವಕಾಶ ( ಡೆಸ್ಕ್ಟಾಪ್ ಕಂಪ್ಯೂಟರಿಗೆ ಹೋಲಿಸಿದರೆ )

ಇನ್ನು ಕೆಲ ವಿಷಯಗಳನ್ನು ಈ ಕೆಳಗಿನ ವಿಡಿಯೋದಲ್ಲಿ ತಿಳಿಸಿದ್ದೇನೆ.

ಲ್ಯಾಪ್ಟಾಪ್ ಅಥವಾ ಡೆಸ್ಕ್ಟಾಪ್ ಕಂಪ್ಯೂಟರ್ಗಳಲ್ಲಿ ಯಾವುದು ನಿಮಗೆ ಉತ್ತಮ ?